Posts

Image
ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕುಟುಂಬಕ್ಕೆ  ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ನೇತ್ರಾವತಿ ಮೋಹನ್ (47) ಬುಧವಾರ ಮಧ್ಯಾನ  ಕೃಷಿ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಕೆಇಬಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆಯಲ್ಲಿ. ನೇತ್ರಾವತಿ ಮೋಹನ್ ರವರ ನಿವಾಸಕ್ಕೆ ಸಮಾಜ ಸೇವಕರಾದ  ಆರ್.ಟಿ.ಓ ಮಲ್ಲಿಕಾರ್ಜುನ್ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿ ಮೃತ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯದ ಜೊತೆಗೆ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದ ಮಾತನಾಡಿದ ಅವರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಆಕಸ್ಮಿಕ ಅವಘಡಗಳಿಂದ ಮೃತಪಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ತಮ್ಮ ಕಾಯಕವನ್ನು ಮಾಡಬೇಕು ಇಲ್ಲದಿದ್ದರೆ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಉದ್ಭವವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.   ಈ ಸಂದರ್ಭದಲ್ಲಿ ಗಂಜಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಪರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಸದ್ಯಸ ನಾಗೇಶ್, ಮುಖಂಡರಾದ ಮಂಜಣ್ಣ, ಲೋಕೇಶ್, ರಾಜಣ್ಣ, ಚಂನ್ನೇಗೌಡ, ಮಂಜುನಾಥ್, ಶಿವಣ್ಣ,ಕುಮಾರ್, ರಾಕೇಶ್, ರವಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಲೀಸರು ಮತ್ರು ತಾಲ್ಲೂಕು ಆಡಳಿತದಿಂದ ಅಮಾನವೀಯ ಕೃತ್ಯ, ರೈತ ಸಂಘ ಆಕ್ರೋಶ

ಕೆ.ಆರ್.ಪೇಟೆ,ಮಾ.21: ತಾಲ್ಲೂಕಿನ ಬೀರುವಳ್ಳಿ ಗ್ರಾಮದಲ್ಲಿ ನಾಗೇಂದ್ರ ಶೆಟ್ಟಿ ಅವರು ತಮ್ಮ ಜಮೀನಿನಲ್ಲಿ ಬೆಳಿದಿದ್ದ   ಜಾನುವಾರು ‌ಮೇವಿನ ಬೆಳೆ ಹಾಗೂ ಕೃಷಿ ಪಂಪ್ ಸೆಟ್ ಅನ್ನು  ನಾಶ ಮಾಡಿ ಅಮಾನವೀಯವಾಗಿ ವರ್ತಿಸಿರುವ ತಾಲ್ಲೂಕು ಆಡಳಿತ ಹಾಗೂ ಗ್ರಾಮಾಂತರ ಪೋಲೀಸರ ವಿರುದ್ದ ತಾಲ್ಲೂಕು ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಬಡ ರೈತ ನಾಗೇಂದ್ರಶೆಟ್ಟಿ  ಕುಟುಂಬದ ಜಾನುವಾರು ರಕ್ಷಣೆಗೆ  ಮೇವು ಒದಗಿಸಿಬೇಕು. ನಾಶ ಪಡಿಸಿರುವ  ಕೃಷಿ ಪಂಪ್ ಸೆಟ್ ಸರಿಪಡಿಸಿಕೊಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಅಗ್ರಹಿಸಿದ್ದಾರೆ. ಜಮೀನು ವ್ಯಾಜ್ಯ ಸಂಬಂಧ ನ್ಯಾಯಾಲಯದಲ್ಲಿ  ದಾವೆ ಇದೆ ಎಂದು ದಾಖಲೆಗಳನ್ನು ನೀಡಿದರೂ ಮೇವು ನಾಶ ಪಡಿಸುವ ಮೂಲಕ ಮೂಕ ಗೋವುಗಳ ಆಕ್ರಂಧನಕ್ಕೆ ಕಾರಣರಾಗಿದ್ದಾರೆ. ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ಇರುವ ಸಂದರ್ಭದಲ್ಲಿ  ಮಧ್ಯ ಪ್ರವೇಶ ಮಾಡಲು ಪೋಲೀಸರಿಗಾಗಲಿ, ತಾಲ್ಲೂಕು ಆಡಳಿತಕ್ಕಾಗಲಿ  ಯಾವುದೇ ಹಕ್ಕಿಲ್ಲದೇ ಇದ್ದರೂ ಸಹ ಯಾವುದೋ  ಆಮಿಷಕ್ಕೆ  ಒಳಗಾಗಿ ಬಡ ರೈತ ನಾಗೇಂದ್ರಶೆಟ್ಟಿ  ಬೆಳೆದಿದ್ದ ಜಾನುವಾರು ಮೇವು ಹಾಗೂ ಕೃಷಿ ಪಂಪ್ ಸೆಟ್, ನೀರಿನ ಪೈಪ್ ಗಳನ್ನು ನಾಶ ಮಾಡಿ ಅಮಾನವೀಯಯನ್ನು ಪ್ರದರ್ಶನ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯ ಪ್ರವೇಶ ಮಾಡ...

ಇಂದು ಒಕ್ಕಲಿಗ ಬಂಧುಗಳಿಂದ ಭಗವಾನ್ ವಿರುದ್ದ ಪ್ರತಿಭಟನೆ

ಕೆ.ಆರ್.ಪೇಟೆ: ತಾಲ್ಲೂಕು ಯುವ ಒಕ್ಕಲಿಗರ ಹೋರಾಟ ವೇದಿಕೆ  ವತಿಯಿಂದ ಅ.18ರಂದು  ಬುಧವಾರ ಬೆಳಿಗ್ಗೆ  11ಗಂಟೆಗೆ ಮಹಿಷ ದಸರಾ  ಸಮಾರಂಭದಲ್ಲಿ  ಒಕ್ಕಲಿಗರನ್ನು‌ ಕುರಿತು ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ದ ಪ್ರತಿಭಟನೆಯನ್ನು ಪಟ್ಟಣದ  ಟಿ.ಬಿ.ಸರ್ಕಲ್ ವೃತ್ತದಲ್ಲಿ   ಹಮ್ಮಿಕೊಳ್ಳಲಾಗಿದೆ ಹಾಗಾಗಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ತಾಲ್ಲೂಕು ಯುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಒಂದೆಡೆ ಸೇರಿ ಬಿತ್ತಿಪತ್ರಗಳು ಹಾಗೂ ಭಗವಾನ್ ಪ್ರತಿಕೃತಿಯೊಂದಿಗೆ ಮೆರವಣಿಗೆ ನಡೆಸಿ ಟಿ.ಬಿ.ವೃತ್ತದಲ್ಲಿ ಭಗವಾನ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುವುದು.ಅನಂತರ ತಾಲ್ಲೂಕು ‌ಕಚೇರಿಗೆ ಬೈಕ್ ರ್ಯಾಲಿ ಮೂಲಕ ತೆರಳಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಗುತ್ತದೆ. ಹಾಗಾಗಿ ಒಕ್ಕಲಿಗ ಕುಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ತಾಲ್ಲೂಕು  ಯುವ ಒಕ್ಕಲಿಗರ ಹೋರಾಟ ವೇದಿಕೆಯ  ಪದಾಧಿಕಾರಿಗಳು ಮನವಿ‌ ಮಾಡಿದ್ದಾರೆ.

ಸುದ್ದಿ ಸಂಗಮ

Image
ಕೆ.ಆರ್.ಪೇಟೆ: ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಕರೆ ನೀಡಲಾಗಿದ್ದ  ಕೆ.ಆರ್.ಪೇಟೆ  ಬಂದ್ ಸಂಪೂರ್ಣ ಯಶಸ್ವಿಯಾಗಿ ನಡೆಯಿತು.  ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ್ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ  ರೈತಪರ ಸಂಘಟನೆಗಳು,  ಕನ್ನಡಪರ ಸಂಘಟನೆಗಳು  ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳು, ವಕೀಲರ ಸಂಘ, ಪತ್ರಕರ್ತರ ಸಂಘಟನೆಗಳು,  ಎಳನೀರು ವ್ಯಾಪಾರಿಗಳ ಸಂಘ, ರಾಜಸ್ತಾನ ಸಮಾಜ ಸೇವಾ ಸಂಘ,  ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು  ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕಾರ್ಯಕರ್ತರು  ಹೋರಾಟದಲ್ಲಿ ಭಾಗಿಯಾಗಿದ್ದರು. ವಕೀಲರಿಂದ ನ್ಯಾಯಾಲಯ ಕಲಾಪ ಬಹಿಷ್ಕಾರ:    ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ನ್ಯಾಯಾಲಯಗಳ ಕಲಾಪ ಬಹಿಷ್ಕಾರ ಮಾಡಿ ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ಚಳುವಳಿ ನಡೆಸಿದರು.  ಬಂದ್ ಅಂಗವಾಗಿ ಪಟ್ಟಣದ  ಪ್ರವಾಸಿ ಮಂದಿರ ವೃತ್ತದ ಮೈಸೂರು- ಚನ್ನರಾಯಪಟ್ಟಣ ಮುಖ್ಯ ರಸ್ತೆಯನ್ನು  ಬಂದ್ ಮಾಡಿ ಮಧ್ಯಾಹ್ನ 2ಗಂಟೆಯವರೆಗೆ ರಸ್ತೆ ತಡೆ ಚಳುವಳಿ  ನಡೆಸಿದರು. ತಾಲ್ಲೂಕು ರಾಜಸ್ಥಾನ್ ಸಮಾಜ ಸಂಘದ ಪದಾಧಿಕಾ...

ಸೆ.26ರ ಕೆ.ಆರ್.ಪೇಟೆ ಬಂದ್ ಕರವೇ ಸ್ವಾಭಿಮಾನಿ ಸೇನೆ ಸಂಪೂರ್ಣ ಬೆಂಬಲ: ಅಧ್ಯಕ್ಷ ಸಮೀರ್

Image
ಕೆ.ಆರ್.ಪೇಟೆ: ತಾಲ್ಲೂಕು ಕಾವೇರಿ-ಹೇಮಾವತಿ ನೀರು ಉಳಿಸಿ ಹೋರಾಟ ಸಮಿತಿ ವತಿಯಿಂದ ಕರೆಯಲಾಗಿರುವ  ಸೆ‌.26ರ ನಡೆಯಲಿರುವ ಕೆ.ಆರ್.ಪೇಟೆ ಬಂದ್ ಗೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪಟ್ಟಣದ ಕರವೇ ಸ್ವಾಭಿಮಾನಿ ಸೇನೆ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು,   ಕಾನೂನು ಸಲಹೆಗಾರ ವಕೀಲ ಅರ್.ಎನ್.ದೇವಾನಂದ್, ಸಂಘಟನಾ ಕಾರ್ಯದರ್ಶಿ ಅಮ್ಜದ್ ಖಾನ್, ಕಾರು ‌ಮಾಲೀಕರು ಮತ್ತು ಚಾಲಕರ ಘಟಕದ ಅಧ್ಯಕ್ಷ  ಪಿ.ಕೆ.ಜಿ.ಮಹೇಶ್, ಕಾರ್ಮಿಕರ ಘಟಕದ ದಯಾನಂದರಾವ್,  ಆಟೋ ಘಟಕದ ಕೆ.ಎನ್.ವಾಸುದೇವ್, ಆಟೋ ಜಾವಿದ್ ಮತ್ತಿತರರು ಕಾವೇರಿ ಕೊಳ್ಳದಲ್ಲಿ ಮಳೆ ಇಲ್ಲದೇ ಜನ-ಜಾನುವಾರುಗಳಿಗೆ ನೀರಿಲ್ಲದೇ ತೀವ್ರ ಹಾಹಾಕಾರ ಉಂಟಾಗಿದೆ. ಆದರೂ ಕೇಂದ್ರ ನದಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನಿತ್ಯ 5ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.  ನೀರು ಬಿಡುವಂತೆ ಆದೇಶ ಮಾಡುವ ಮೊದಲು ಕಾವೇರಿ ಕಣಿವೆಯ ನೀರು ಸಂಗ್ರಹ ಪರಿಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಿ ನಂತರ ತೀರ್ಪು ನೀಡಬೇಕು ಆದರೆ ಕರ್ನಾಟಕದಲ್ಲಿ ಬರಗಾಲ ಇದ್ದರೂ ಸಹ ತಮಿಳುನಾಡಿಗೆ ನೀರು ...

ಸೆ.26ಮಂಗಳವಾರ ಕೆ.ಆರ್.ಪೇಟೆ ಬಂದ್ ಯಶಸ್ಸಿಗೆ ಸಹಕರಿಸಲು ಸಂಘಟನೆಗಳ ಪೂರ್ವಭಾವಿ ಸಭೆ.

Image
ಕೆ.ಆರ್.ಪೇಟೆ:ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಸೆ.26ರಂದು ಮಂಗಳವಾರ ಬಂದ್ ಕರೆಗೆ ವ್ಯಾಪಕ ಬೆಂಬಲ. ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ್ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರೈತಪರ ಸಂಘಟನೆಗಳು,  ಕನ್ನಡಪರ ಸಂಘಟನೆಗಳು  ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳು, ವಕೀಲರ ಸಂಘದ, ಎಳನೀರು ವ್ಯಾಪಾರಿಗಳ ಸಂಘ, ರಾಜಸ್ತಾನ ಸಮಾಜ ಸೇವಾ ಸಂಘಟನೆಗಳ  ಪದಾಧಿಕಾರಿಗಳ ಹಾಗೂ   ಮುಖಂಡರ ಸಭೆಯಲ್ಲಿ ಮಂಗಳವಾರ  ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಕೆ.ಆರ್.ಪೇಟೆ ಸ್ವಯಂ ಪ್ರೇರಿತ ಬಂದ್ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಬಂದ್ ಅಂಗವಾಗಿ ಪಟ್ಟಣದ  ಪ್ರವಾಸಿ ಮಂದಿರ ವೃತ್ತದ ಮೈಸೂರು- ಚನ್ನರಾಯಪಟ್ಟಣ ಮುಖ್ಯ ರಸ್ತೆಯನ್ನು  ಬಂದ್ ಮಾಡಿ, ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಸಂಜೆಯವರೆವಿಗೂ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸುಪ್ರಿಂ ಕೋರ್ಟ್ ಮತ್ತು ಕಾವೇರಿ ನೀರು ಹಂಚಿಕೆ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು‌ ಕುರಿತು ಮಾತನಾಡಲಿದ್ದಾರೆ.  ಮೆಡಿಕಲ್, ಆಸ್ಪತ್ರೆ, ಆಂಬುಲೆನ್ಸ್,  ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆ...

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ

Image
ಕೆ.ಆರ್ ಪೇಟೆ: ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ  ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಅದೇಶವನ್ನು ವಿರೋಧಿಸಿ  ತಾಲ್ಲೂಕು  ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತ  ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.   ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಹೊನ್ನೇನಹಳ್ಳಿ  ಸೋಮಶೇಖರ್  ನೇತೃತ್ವದಲ್ಲಿ  ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ನೀರಾವರಿ ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟ್ ಆದೇಶಗಳ  ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ  ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಎಚ್.ಆರ್.ಸೋಮಶೇಖರ್ ಮಾತನಾಡಿ ಕರ್ನಾಟಕದಲ್ಲಿ ಮಳೆ ಇಲ್ಲದೇ  ನಮಗೆ ಕುಡಿಯುವ ನೀರಿಗೆ  ಹಾಹಾಕಾರ ಉಂಟಾಗಿದೆ. ಆದರೆ ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ನೀರು ಬಿಡಿ ಎಂದು ಕೇಳುತ್ತಿರುವ ನ್ಯಾಯ ಸಮ್ಮತವಾದ ಆದೇಶವಲ್ಲ. ನಮಗೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಬ್ರಿಟೀಷರು ಮಾಡಿಕೊಂಡ   ಕಾವೇರಿ ನೀರು ಹಂಚಿಕೆ ಒಪ್ಪಂದವನ್ನು ಸ್ವಾತಂತ್ರ್ಯ ಬಂದ ತಕ್ಷಣವೇ ವಜಾ ಮಾಡಮಾಡಬೇಕಾಗಿತ್ತು. ಆದರೆ ಅದನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡಿರುವುದೇ ಮಹಾ ಅಪರಾಧವಾ...