ಇಂದು ಒಕ್ಕಲಿಗ ಬಂಧುಗಳಿಂದ ಭಗವಾನ್ ವಿರುದ್ದ ಪ್ರತಿಭಟನೆ

ಕೆ.ಆರ್.ಪೇಟೆ: ತಾಲ್ಲೂಕು ಯುವ ಒಕ್ಕಲಿಗರ ಹೋರಾಟ ವೇದಿಕೆ  ವತಿಯಿಂದ ಅ.18ರಂದು  ಬುಧವಾರ ಬೆಳಿಗ್ಗೆ  11ಗಂಟೆಗೆ ಮಹಿಷ ದಸರಾ  ಸಮಾರಂಭದಲ್ಲಿ  ಒಕ್ಕಲಿಗರನ್ನು‌ ಕುರಿತು ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ದ ಪ್ರತಿಭಟನೆಯನ್ನು ಪಟ್ಟಣದ  ಟಿ.ಬಿ.ಸರ್ಕಲ್ ವೃತ್ತದಲ್ಲಿ   ಹಮ್ಮಿಕೊಳ್ಳಲಾಗಿದೆ ಹಾಗಾಗಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ತಾಲ್ಲೂಕು ಯುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಒಂದೆಡೆ ಸೇರಿ ಬಿತ್ತಿಪತ್ರಗಳು ಹಾಗೂ ಭಗವಾನ್ ಪ್ರತಿಕೃತಿಯೊಂದಿಗೆ ಮೆರವಣಿಗೆ ನಡೆಸಿ ಟಿ.ಬಿ.ವೃತ್ತದಲ್ಲಿ ಭಗವಾನ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುವುದು.ಅನಂತರ ತಾಲ್ಲೂಕು ‌ಕಚೇರಿಗೆ ಬೈಕ್ ರ್ಯಾಲಿ ಮೂಲಕ ತೆರಳಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಗುತ್ತದೆ.
ಹಾಗಾಗಿ ಒಕ್ಕಲಿಗ ಕುಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ತಾಲ್ಲೂಕು  ಯುವ ಒಕ್ಕಲಿಗರ ಹೋರಾಟ ವೇದಿಕೆಯ  ಪದಾಧಿಕಾರಿಗಳು ಮನವಿ‌ ಮಾಡಿದ್ದಾರೆ.

Popular posts from this blog

ಯಶಸ್ವಿಯಾಗಿ ನಡೆದ ಕಾಳಿದಾಸ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ