ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಕೆ.ಆರ್ ಪೇಟೆ: ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ  ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಅದೇಶವನ್ನು ವಿರೋಧಿಸಿ  ತಾಲ್ಲೂಕು  ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತ  ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
 
ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಹೊನ್ನೇನಹಳ್ಳಿ  ಸೋಮಶೇಖರ್  ನೇತೃತ್ವದಲ್ಲಿ  ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ನೀರಾವರಿ ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟ್ ಆದೇಶಗಳ  ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ  ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಎಚ್.ಆರ್.ಸೋಮಶೇಖರ್ ಮಾತನಾಡಿ ಕರ್ನಾಟಕದಲ್ಲಿ ಮಳೆ ಇಲ್ಲದೇ  ನಮಗೆ ಕುಡಿಯುವ ನೀರಿಗೆ  ಹಾಹಾಕಾರ ಉಂಟಾಗಿದೆ. ಆದರೆ ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ನೀರು ಬಿಡಿ ಎಂದು ಕೇಳುತ್ತಿರುವ ನ್ಯಾಯ ಸಮ್ಮತವಾದ ಆದೇಶವಲ್ಲ. ನಮಗೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಬ್ರಿಟೀಷರು ಮಾಡಿಕೊಂಡ   ಕಾವೇರಿ ನೀರು ಹಂಚಿಕೆ ಒಪ್ಪಂದವನ್ನು ಸ್ವಾತಂತ್ರ್ಯ ಬಂದ ತಕ್ಷಣವೇ ವಜಾ ಮಾಡಮಾಡಬೇಕಾಗಿತ್ತು. ಆದರೆ ಅದನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡಿರುವುದೇ ಮಹಾ ಅಪರಾಧವಾಗಿದೆ. ಕಾವೇರಿ ನದಿ ಹುಟ್ಟುವ ಪ್ರದೇಶದ ಅಭಿವೃದ್ಧಿಗೆ ಯಾವುದೇ ಅನುಧಾನ ನೀಡದೇ ಇರುವ ಅಥವಾ ಕಾವೇರಿ ನದಿಪಾತ್ರದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಇರುವ ಈ ಸಂದರ್ಭದಲ್ಲಿ ಬೇಸಾಯಕ್ಕೆ ನೀರು ಕೇಳುತ್ತಿರುವ ತಮಿಳುನಾಡಿನ ಸರ್ಕಾರಕ್ಕೆ ಯಾವುದೇ ಮಾನವೀಯತೆ ಇಲ್ಲದಾಗಿದೆ. ನಮ್ಮ ಕರ್ನಾಟಕದಲ್ಲಿ  ಜನಜಾನುವಾರುಗಳಿಗೆ ನೀರಿಲ್ಲ.ಬೆಳೆದ ಬೆಳೆಗಳಿಗೆ ನೀರಿಲ್ಲದೆ ಒಣಗಿತ್ತಿವೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಗಮನಿಸಿ ಒಂದು ತಂಡವನ್ನು ರಚನೆ ಮಾಡಿ ಕಳಿಸಿ ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಆದೇಶವನ್ನು ನೀಡಬೇಕು.ಇದನ್ನು ಬಿಟ್ಟು ಏಕಾಏಕಿ ನೀರು ಹರಿಸಿ ಆದೇಶ ನೀಡುವುದು ಎಷ್ಟು ಸರಿ ಎಂದು ಸುಪ್ರಿಂ ಕೋರ್ಟ್ ಮತ್ತು ನೀರಾವರಿ ಪ್ರಾಧಿಕಾರವನ್ನು  ಪ್ರಶ್ನೆ ಮಾಡಿದರು.  ರಾಜ್ಯ ಸರ್ಕಾರವು ಸಹ ಉತ್ತಮ ವಕೀಲರನ್ನು ನೇಮಿಸಿ ಕಾವೇರಿ ನಮ್ಮ ನೀರು ನಮ್ಮ ಹಕ್ಕು ಎಂದು ಬಲವಾಗಿ ಪ್ರತಿಪಾದಿಸುವಂತೆ ಸಲಹೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ಸರ್ವ ಪಕ್ಷಗಳು ನಾಡಿನ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣ ಬದಿಗೊತ್ತಿ ಕಾವೇರಿ ನೀರಿಗಾಗಿ ಬೀದಿಗಿಳಿದು  ಹೋರಾಟ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಎಸ್.ರವಿ,ಪ್ರದಾನ ಕಾರ್ಯದರ್ಶಿ ಕಾಮನಹಳ್ಳಿ  ಪ್ರಭು, ಉಪಾಧ್ಯಕ್ಷ ಯುವರಾಜ್,ಅನಂದ್, ಯುವ  ಅಧ್ಯಕ್ಷರಾದ ಕಾಮನಹಳ್ಳಿ ಮಹೇಶ್,ನಗರ ಘಟಕದ ಅಧ್ಯಕ್ಷ ಯೋಗೇಶ್,ಕಸಬಾ ಅಧ್ಯಕ್ಷ ವಸಂತ್, ರಾಘವೇಂದ್ರ, ಹರೀಶ್, ದಿನೇಶ್,ಸಂಕರ್, ಶಿವಾಜಿ,ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಮತ್ತು ಮಹಿಳಾ ಅಧ್ಯಕ್ಷರಾದ  ಜಯಲಕ್ಷ್ಮಿ, ಪದಾಧಿಕಾರಿಗಳಾದ ಪ್ರತಾಪ್,
ಸುಂದ್ರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ  ಭಾಗವಹಿಸಿದ್ದರು.

Popular posts from this blog

ಯಶಸ್ವಿಯಾಗಿ ನಡೆದ ಕಾಳಿದಾಸ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ