ಪೋಲೀಸರು ಮತ್ರು ತಾಲ್ಲೂಕು ಆಡಳಿತದಿಂದ ಅಮಾನವೀಯ ಕೃತ್ಯ, ರೈತ ಸಂಘ ಆಕ್ರೋಶ



ಕೆ.ಆರ್.ಪೇಟೆ,ಮಾ.21: ತಾಲ್ಲೂಕಿನ ಬೀರುವಳ್ಳಿ ಗ್ರಾಮದಲ್ಲಿ ನಾಗೇಂದ್ರ ಶೆಟ್ಟಿ ಅವರು ತಮ್ಮ ಜಮೀನಿನಲ್ಲಿ ಬೆಳಿದಿದ್ದ   ಜಾನುವಾರು ‌ಮೇವಿನ ಬೆಳೆ ಹಾಗೂ ಕೃಷಿ ಪಂಪ್ ಸೆಟ್ ಅನ್ನು  ನಾಶ ಮಾಡಿ ಅಮಾನವೀಯವಾಗಿ ವರ್ತಿಸಿರುವ ತಾಲ್ಲೂಕು ಆಡಳಿತ ಹಾಗೂ ಗ್ರಾಮಾಂತರ ಪೋಲೀಸರ ವಿರುದ್ದ ತಾಲ್ಲೂಕು ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೂಡಲೇ ಬಡ ರೈತ ನಾಗೇಂದ್ರಶೆಟ್ಟಿ  ಕುಟುಂಬದ ಜಾನುವಾರು ರಕ್ಷಣೆಗೆ  ಮೇವು ಒದಗಿಸಿಬೇಕು. ನಾಶ ಪಡಿಸಿರುವ  ಕೃಷಿ ಪಂಪ್ ಸೆಟ್ ಸರಿಪಡಿಸಿಕೊಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಅಗ್ರಹಿಸಿದ್ದಾರೆ.
ಜಮೀನು ವ್ಯಾಜ್ಯ ಸಂಬಂಧ ನ್ಯಾಯಾಲಯದಲ್ಲಿ  ದಾವೆ ಇದೆ ಎಂದು ದಾಖಲೆಗಳನ್ನು ನೀಡಿದರೂ ಮೇವು ನಾಶ ಪಡಿಸುವ ಮೂಲಕ ಮೂಕ ಗೋವುಗಳ ಆಕ್ರಂಧನಕ್ಕೆ ಕಾರಣರಾಗಿದ್ದಾರೆ. ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ಇರುವ ಸಂದರ್ಭದಲ್ಲಿ  ಮಧ್ಯ ಪ್ರವೇಶ ಮಾಡಲು ಪೋಲೀಸರಿಗಾಗಲಿ, ತಾಲ್ಲೂಕು ಆಡಳಿತಕ್ಕಾಗಲಿ  ಯಾವುದೇ ಹಕ್ಕಿಲ್ಲದೇ ಇದ್ದರೂ ಸಹ ಯಾವುದೋ  ಆಮಿಷಕ್ಕೆ  ಒಳಗಾಗಿ ಬಡ ರೈತ ನಾಗೇಂದ್ರಶೆಟ್ಟಿ  ಬೆಳೆದಿದ್ದ ಜಾನುವಾರು ಮೇವು ಹಾಗೂ ಕೃಷಿ ಪಂಪ್ ಸೆಟ್, ನೀರಿನ ಪೈಪ್ ಗಳನ್ನು ನಾಶ ಮಾಡಿ ಅಮಾನವೀಯಯನ್ನು ಪ್ರದರ್ಶನ ಮಾಡಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ  ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು  ಮಾಡಬೇಕು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದ್ದಾರೆ.
ಮೇವು ನಾಶ ಮಾಡಲು‌ಮುಂದಾದ ವೇಳೆ ಪೋಲೀಸರನ್ನು 
ಕೈಕಾಲು ಹಿಡಿದು ದನಗಳ  ಮೇವು ನಾಶ ಮಾಡದಂತೆ ರೈತ ನಾಗೇಂದ್ರಶೆಟ್ಟಿ ಮನವಿ ಮಾಡಿದರೂ  ಮೇವು ನಾಶ ಮಾಡಿರುವ ಪೋಲೀಸರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ನಾಗೇಂದ್ರಶೆಟ್ಟಿ ಜಾನುವಾರುಗಳು ಮೇವಿಲ್ಲದೇ ಪರಿತಪಿಸುತ್ತಿವೆ ಇದಕ್ಕೆ ಯಾರು ಹೊಣೆ ಎಂದು  ಕಿಡಿ ಕಾರಿದ್ದಾರೆ.

Popular posts from this blog

ಯಶಸ್ವಿಯಾಗಿ ನಡೆದ ಕಾಳಿದಾಸ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ